ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು) | ಸ್ತೋತ್ರ ಸಂಗ್ರಹ

ಮನವ ಶೋಧಿಸಬೇಕೋ ನಿಚ್ಚ
ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ || ಪ ||

ಧರ್ಮ-ಅಧರ್ಮ ವಿಂಗಡಿಸಿ ನೀ
ಅಧರ್ಮದ ನರಗಳ ಬೇರೆ ಕತ್ತರಿಸಿ
ನಿರ್ಮಲಾಚಾರವ ಚರಿಸಿ ಪರ
ಬ್ರಹ್ಮ ಮೂರುತಿ ಪಾದಕಮಲವ ಭಜಿಸಿ || ೧ ||

ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀನೇ ಜಾಣೋ ಮುಕ್ತಿ
ನಿನಗೆ ದೂರಿಲ್ಲವೋ ಅದೇ ಒಂದು ಗೇಣೋ || ೨ ||

ಆತನ್ನ ನಂಬಿ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಳ್ವನಲ್ಲ
ನೀತಿವಂತರೆ ಕೇಳಿರೆಲ್ಲ ನಮ-
ಗಾತನೆ ಗತಿಯೀವ ಪುರಂದರ ವಿಠಲ || ೩ ||

This entry was posted in ಕೀರ್ತನೆ-ದೇವರ ನಾಮ, ತತ್ತ್ವಪರ, ಹರಿದಾಸ ವಾಙ್ಮಯ, dasa sahitya and tagged ತತ್ವಪರ, ನೀತಿ, ಪುರಂದರ ದಾಸರು, ಬೋಧೆ, Purandara Dasa by Guru. Bookmark the permalink.

<p>You cannot copy content of this page</p>